ಜಾರಕಿಹೊಳಿ ಬ್ರದರ್ಸ್ ಇರುವವರೆಗೆ ಜಿಲ್ಲೆ ವಿಭಜನೆ ಅಸಾಧ್ಯ : ಬಿಮಪ್ಪಾ ಗಡಾದ...
ರಾಜಕಾರಣಿಗಳಿಗೆ ತಮ್ಮ ಅಕ್ರಮ ಚಟುವಟಿಕೆಗಳು ಹೊರಬರುವ ಭಯ ಶುರುವಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಬೆಳಗಾವಿ ಜಿಲ್ಲಾ ವಿಭಜನೆಗೆ ಹಿನ್ನಡೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಇರುವವರೆಗೂ ಜಿಲ್ಲೆ ವಿಭಜನೆ ಅಸಾಧ್ಯ. ರಾಜಕಾರಣಿಗಳು ಮನೆಯಲ್ಲಿ ಕುಳಿತರೆ, ನಾನೇ ಖುದ್ದಾಗಿ ಜಿಲ್ಲೆ ರಚನೆ ಮಾಡಿಸುವೆ ಎಂದರು. ಇನ್ನು ಸರ್ಕಾರದಲ್ಲಿ ಮಂತ್ರಿ ಪದವಿಯ ಮಹತ್ವ ಅರಿಯದವರು ಮಂತ್ರಿಗಳಾಗಿದ್ದಾರೆ. ಮಂತ್ರಿಗಳ ಪತ್ರಗಳಿಗೆ ಲಾಜಿಂಗ್‌ನಲ್ಲಿ ರೂಮ್ ಸಹ ಕೊಡಲ್ಲ ಎಂದು ಗಡಾದ್ ವ್ಯಂಗ್ಯವಾಡಿದರು. ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಗಳಾದರೆ ಸೂಕ್ತ. ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ವಿಭಜನೆಯಾಗಬೇಕು ಎಂದರು. ಈಗಿರುವ ಬಿಜೆಪಿ ಸರ್ಕಾರ ಅವ್ಯವಸ್ಥೆಯಿಂದ ಕೂಡಿದೆ. ಜನಸಾಮಾನ್ಯರ ಗೋಳು ಕೇಳುವವರೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರ ಕೈಕಟ್ಟಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Comments
Post a Comment