ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಂಡ್ಯಾನವಾಡಿ
ಗ್ರಾಮದ ಹಾಲಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಜಲ್ ಜೀವನ್ ಮೇಸ್ಸಿನ ಯೋಜನೆಗೆ ಚಾಲನೆ ನೀಡಲಾಯಿತು.
ಸದಲಗಾ ಕ್ಷೇತ್ರದ ಶಾಸಕರ ಗಣೇಶ್ ಹುಕ್ಕೇರಿ ಅವರ ಪ್ರಯತ್ನದ ಫಲವಾಗಿ ಸುಮಾರು 38 ಲಕ್ಷ ರೂಪಾಯಿ ಅನುದಾನದಲ್ಲಿ ಸಾರ್ವಜನಿಕರ ಭಯಾರಿಕೆ ತನಿಸಲು ಈ ಯೋಜನೆಗೆ ಅನುಷ್ಠಾನ ನೀಡಲಾಯಿತು.
ಹಂಡ್ಯಾನವಾಡಿ ಗ್ರಾಮದಲ್ಲಿ ಸುಮಾರು 140 ಮನೆಗಳಿಗೆ ಕುಡಿಯುವ ನೀರಿಗಾಗಿ ನಲ್ಲಿ (ನಳ) ಜೋಡಣೆ ಹಾಗೂ 2 ಹೊಸ ಬೋರ್ವೆಲ್ ಕೊರೆಸುವುದು ಸೇರಿದಂತೆ 38 ಲಕ್ಷದ ಕಾಮಗಾರಿಗೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಗ್ರಾಮ ಪಂಚಾಯತ ಸದಸ್ಯರು ಗುದ್ದಲಿ ಪೂಜೆ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಪರಶುರಾಮ ಕಾಳೆ, ಗ್ರಾಮ ಪಂಚಾಯತ ಅಧ್ಯಕ್ಷ ಸುಖದೇವ ಅಪ್ಪಾಜಿಗೊಳ, ಸದಸ್ಯರಾದ ಭೀಮಾಜಿ ಗೋಣೆ, ಬಸಗೌಡ ಕಾಳಪ್ಪಗೋಳ, ಭೀಮರಾವ್ ಕಂಚಿನಾಳೆ, ಸುನೀಲ್ ಪೂಜಾರಿ, ಲಕ್ಷ್ಮಣ್ ಜಗನ್, ಹಾಲಪ್ಪ ಮಡಪ್ಪಗೋಳ, ಸುನೀಲ್ ಗೋಣಿ, ಸೇರಿದಂತೆ ಊರಿನ ಗಣ್ಯ ಮಾನ್ಯರು ಭಾಗವಹಿಸಿದ್ದರು.
Comments
Post a Comment